Charitable Trust
Welcome to Shri Jnanashakthi Subrahmanyaswami Temple
ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಸಮೀಪದ ಪಾವಂಜೆ ಕ್ಷೇತ್ರದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನವಿದೆ. ಪ್ರಾಚೀನ ಕಾಲದಿಂದಲೂ “ನಾಗವೃಜ ಕ್ಷೇತ್ರ”ವೆಂದೇ ಪ್ರಸಿದ್ಧಿ ಪಡೆದ ಈ ಪ್ರದೇಶದಲ್ಲಿ ಪಾವಂಜೆ ಕೋಡಿಮನೆ ವಾಸುಭಟ್ಟರು 1920ರಲ್ಲಿ ತಮ್ಮ ಮೂಲನಾಗ ಹಾಗೂ ಅಣ್ಣಪ್ಪ ಸ್ವಾಮಿಯ ಸಾನಿಧ್ಯವಿದ್ದ ಸ್ಥಳದಲ್ಲಿ ಈ ದೇವಾಲಯವನ್ನು ಕಟ್ಟಿಸಿ ನಿರಂತರ ಆರಾಧಿಸುತ್ತಾ ತಮ್ಮ ಬದುಕಿನಲ್ಲಿ ಧನ್ಯತೆ ಕಂಡುಕೊಂಡರು.
ಈ ದೇವಾಲಯವು ಸಂಪೂರ್ಣ ಶಿಲಾಮಯಗೊಂಡು ಶ್ರೀಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ತಾ.09.06.2005ರಂದು ತಂತ್ರೋಕ್ತವಾಗಿ ಪಾಂಚರಾತ್ರಾಗಮದ ಶಿವಾಯತನದಲ್ಲಿ ಶಿವಾಂಶ ರೂಪದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿಯ ಪ್ರತಿಷ್ಠೆಯು ನೆರವೇರಿ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿತು.
ಅನಂತರದ ದಿನಗಳಲ್ಲಿ ಶ್ರೀದೇವಳವು ಆಧ್ಯಾತ್ಮಿಕ ವಲಯದಲ್ಲಿ ಸಾತ್ವಿಕ ಶಕ್ತಿ ಸಂಪನ್ನಗೊಂಡ ಜಾಗೃತ ಕ್ಷೇತ್ರವಾಗಿ ಗುರುತಿಸಲ್ಪಡುತ್ತಿದೆ. ಅಂದಿನಿಂದಲೂ ಸೇವಾದಾರರಿಂದ ನಿತ್ಯರಂಗಪೂಜೆ, ಸುಬ್ರಹ್ಮಣ್ಯ ಹೋಮ, ಪ್ರಾಯಶ್ಚಿತ್ತ ಹೋಮಗಳು, ಶಾಂತಿ ಪ್ರಕ್ರಿಯೆಗಳು, ಅನ್ನದಾನ, ಸಾಂಸ್ಕೃತಿಕ ಕಲಾಸೇವೆಗಳು ನಿರಂತರ ನಡೆದು ಬರುತ್ತಿವೆ.
ತಂತ್ರೋಕ್ತವಾಗಿ ನಿರ್ಮಾಣಗೊಂಡ ಈ ದೇವಾಲಯವು ಧನಾತ್ಮಕ ಶಕ್ತಿಯ ಸಂಗ್ರಹದಿಂದಾಗಿ ಜ್ಞಾನಕೇಂದ್ರವಾಗಿ, ದಾನಕೇಂದ್ರವಾಗಿ, ಸಾತ್ವಿಕ ಚಟುವಟಿಕೆಗಳ ತಾಣವಾಗಿ ಬದಲಾಗುತ್ತಿರುವುದನ್ನು ಎಲ್ಲರೂ ಗಮನಿಸಿದ ಅಂಶ.
ನಮ್ಮೀ ದೇವಾಲಯದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಪನ್ನಗೊಂಡು ಹನ್ನೆರೆಡು ಸಂವತ್ಸರಗಳು ಸಂದ ಬಳಿಕ ಭಕ್ತರ ಮನೋಭೀಷ್ಟ ಪೂರೈಸುವ ದೇವಾಲಯ ಹಾಗು ಶ್ರೀಸ್ವಾಮಿಯ ಸಾನಿಧ್ಯ ವೃದ್ಧಿಗಾಗಿ ಮತ್ತೊಮ್ಮೆ 19.04.2018 ರಂದು ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿದೆ.
Pavanje Shri Jnanashakthi Subrahmanyaswamy Temple, as you are aware, has become a hub of religious, cultural and social activities for the last more than 10 years after having been renovated and the Prathishtha Brahmakalashotsava celebrated in the gracious and auspicious presence and from the lotus hands of Sri Sri Jagadguru Shankaracharya Mahasamsthanam Dakshinamnaya Shri Shringeri Sharada Peethadheeshwara Shri Shri Jagadguru Bharathitheertha Mahaswamiyar on 9-6- 2005. Since then onwards until date, the temple is being sanctified by the performance of daily Rangapooja, Gopooja, Nithyannadana, Cultural programmes on day to day basis, various ‘ Havanas ‘ including ‘ Sri Subrahmanya Homa ‘ and other offerings, ‘ Veda Parayanas ‘ and ‘ Anushthanas’. “ Sankramanotsava” to the Chief Diety has also been organized on every Sankramana at “ Sri Sharadhwatha Yajnangana” which includes Veda Parayana, renderingof musics both instrumental and vocal and other Indian Classical and cultural events from sunrise to sunset on the said day.
Temple Timings & Puja Timings
- 4.30 Am to 8 pm ( MON TO SUNDAY )
- ಪ್ರಾತಃ ಕಾಲದ ಪೂಜೆ : 6 ಘಂಟೆಗೆ
- ಮಧ್ಯಾಹ್ನದ ಮಹಾ ಪೂಜೆ : 12 ಘಂಟೆಗೆ
- ನಿತ್ಯಾನ್ನದಾನ : ಮಧ್ಯಾಹ್ನ 12 ಘಂಟೆಯಿಂದ 2.30 ರ ವರೆಗೆ.
- ನಿತ್ಯ ರಂಗಪೂಜೆ ಸಹಿತ ಸಾಯಂಕಾಲದ ಪೂಜೆ : ಸಂಜೆ 6.30 ರಿಂದ 7.30 ರ ವರೆಗೆ.