ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ.

Shri Jnanashakthi Subrahmanyaswami Temple, Nagavruja Kshetra Pavanje

Rahul N Madhyastha

ಸುಬ್ರಹ್ಮಣ್ಯ ಮಾನಸ ಪೂಜೆ – Subrahmanya Manasa Pooje

ಶ್ರೀಯುತ ದಿ.ಎರ್ಮಾಳು ರಾಮಚಂದ್ರ ರಾಯರು ಸುಮಾರು 4 ದಶಕಗಳ ಕಾಲ ಪಾವಂಜೆ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿದ್ದು ಎಲ್ಲಾ ಕೆಲಸಗಳಲ್ಲಿಯೂ ತ್ರಿಕರಣಪೂರ್ವಕವಾಗಿ ತೊಡಗಿಸಿಕೊಂಡಿದ್ದರು. ಶ್ರೀಯುತರು ಜೀವನದ ಕೊನೆಯತನಕವೂ ನಿತ್ಯ ನಿರಂತರವಾಗಿ ಶ್ರೀಸ್ವಾಮಿಯನ್ನು ಮನಸ್ಸಿನಲ್ಲಿಯೇ ಆರಾಧಿಸುತ್ತಿದ್ದರು. ಈ ಮೌನ ಪೂಜೆಯನ್ನು ವೇದಕೃಷಿಕ ಶ್ರೀ ಕೆ.ಎಸ್ ನಿತ್ಯಾನಂದರು ಪದಪುಂಜಗಳನ್ನು ಜೋಡಿಸಿ, ಭಾವವನ್ನು ಸಂಯೋಜಿಸಿ, ಭಕ್ತಿಯನ್ನು ಅಂತರ್ಗತಗೊಳಿಸಿ ಲಿಪಿಬದ್ಧಗೊಳಿಸಿದ್ದಾರೆ. ಈ ಸುಬ್ರಹ್ಮಣ್ಯ ಮಾನಸ ಪೂಜೆಯನ್ನು ಭಾಗವತ ಪಟ್ಲ ಸತೀಶ ಶೆಟ್ಟರು ಅತ್ಯಂತ ಸುಶ್ರಾವ್ಯವಾಗಿ ಹಾಡಿದ್ದಾರೆ. ಇದರ ಪ್ರಯೋಜನವನ್ನು ಆಸ್ತಿಕ ಜನರು …

ಸುಬ್ರಹ್ಮಣ್ಯ ಮಾನಸ ಪೂಜೆ – Subrahmanya Manasa Pooje Read More »

ಶರನ್ನವರಾತ್ರಿ ಉತ್ಸವ – 03.10.2024 ರಿಂದ 12.10.2024

ಶ್ರೀ ದೇವಳದಲ್ಲಿ 03.10.2024 ರಿಂದ ಮೊದಲ್ಗೊಂಡು 12.10.2024ರವರೆಗೆ ಪ್ರತಿನಿತ್ಯ ಯಂತ್ರೋಪರಿ ಸ್ಥಾಪಿತ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿಯ ಆರಾಧನೆಯು ಚಂಡಿಕಾ ಹೋಮದೊಂದಿಗೆ ಸಂಪನ್ನಗೊಳ್ಳಲಿದೆ.

ಶ್ರೀ ಗೋಪಾಲಕೃಷ್ಣ ಪಾಂಡುರಂಗ ದೇವರ ಸನ್ನಿಧಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ – 26.08.2024

ಶ್ರೀ ದೇವಳದ ಪ್ರಾಕಾರದಲ್ಲಿ ನೆಲೆ ನಿಂತಿರುವ ಶ್ರೀ ಗೋಪಾಲಕೃಷ್ಣ ಪಾಂಡುರಂಗ ದೇವರ ಸನ್ನಿಧಿಯಲ್ಲಿ 26.08.2024ರಂದು ಶ್ರೀಕೃಷ್ಣ ಜನ್ಮಾಷ್ಟಮಿಯು ವಿವಿಧ ಪ್ರಾಕಾರದ ಆರಾಧನೆಗಳಿಂದ ಸಂಪನ್ನಗೊಳ್ಳಲಿದೆ.

ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ “ತೈಲಾಭಿಷೇಕ ಮತ್ತು ಭಜನಾ ಸಂಕೀರ್ತನೆ- 10.08.2024

10.08.2024ರಂದು ಶ್ರೀ ಕ್ಷೇತ್ರದಲ್ಲಿರುವ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ಸೂರ್ಯೋದಯದಿಂದ ಸೂರ್ಯಾಸ್ತ ಪರ್ಯಂತ ನಿರಂತರ “ತೈಲಾಭಿಷೇಕ ಮತ್ತು ಭಜನಾ ಸಂಕೀರ್ತನೆ” ಜರಗಲಿದೆ.

ಪತ್ತನಾಜೆ – ಅಂಕುರಾರ್ಪಣೆ, ನಿರಂತರ ರುದ್ರಾಭಿಷೇಕ, ವರುಣ + ಪರ್ಜನ್ಯ ಆರಾಧನೆ

ದಿನಾಂಕ 24.05.2024ರಂದು ಪತ್ತನಾಜೆಯ ಪ್ರಯುಕ್ತ ಶ್ರೀ ದೇವಳದಲ್ಲಿ ಬೆಳಿಗ್ಗೆ ಅಂಕುರಾರ್ಪಣೆ, ಶ್ರೀ ಗೌತಮೇಶ್ವರ ಸನ್ನಿಧಿಯಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ರುದ್ರಾಭಿಷೇಕವು ಜರಗಲಿದೆ. ಹಾಗೆಯೇ, ಬೆಳಿಗ್ಗೆ 7 ಘಂಟೆಗೆ ವರುಣ+ಪರ್ಜನ್ಯ ಕಲಶ ಪ್ರತಿಷ್ಠೆ, ಸಂಜೆ 7ಕ್ಕೆ ಪುಷ್ಕರಿಣಿಯಲ್ಲಿ ವರುಣ+ಪರ್ಜನ್ಯ ಪೂಜೆ, ತದನಂತರ ಶ್ರೀದೇವರ ಸನ್ನಿಧಿಯಲ್ಲಿ ನಿತ್ಯಪೂಜೆ, ನಿತ್ಯರಂಗಪೂಜೆ ಸಂಪನ್ನಗೊಳ್ಳಲಿದೆ. ಸರ್ವರಿಗೂ ಆದರದ ಸ್ವಾಗತ