Temple

Welcome to Shri Jnanashakthi Subrahmanyaswami Temple
ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಸಮೀಪದ ಪಾವಂಜೆ ಕ್ಷೇತ್ರದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನವಿದೆ. ಪ್ರಾಚೀನ ಕಾಲದಿಂದಲೂ “ನಾಗವೃಜ ಕ್ಷೇತ್ರ“ವೆಂದೇ ಪ್ರಸಿದ್ಧಿ ಪಡೆದ ಈ ಪ್ರದೇಶದಲ್ಲಿ ಪಾವಂಜೆ ಕೋಡಿಮನೆ ವಾಸುಭಟ್ಟರು 1920ರಲ್ಲಿ ತಮ್ಮ ಮೂಲನಾಗ ಸನ್ನಿಧಿಯಲ್ಲಿ ಈ ದೇವಾಲಯವನ್ನು ಕಟ್ಟಿಸಿ ನಿರಂತರ ಆರಾಧಿಸುತ್ತಾ ತಮ್ಮ ಬದುಕಿನಲ್ಲಿ ಧನ್ಯತೆ ಕಂಡುಕೊಂಡರು.
ಈ ದೇವಾಲಯವು ಸಂಪೂರ್ಣ ಶಿಲಾಮಯಗೊಂಡು ಶ್ರೀಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ತಾ.09.06.2005ರಂದು ತಂತ್ರೋಕ್ತವಾಗಿ ಪಾಂಚರಾತ್ರಾಗಮದ ಶಿವಾಯತನದಲ್ಲಿ ಶಿವಾಂಶ ರೂಪದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿಯ ಪ್ರತಿಷ್ಠೆಯು ನೆರವೇರಿ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿತು.
ಅನಂತರದ ದಿನಗಳಲ್ಲಿ ಶ್ರೀದೇವಳವು ಆಧ್ಯಾತ್ಮಿಕ ವಲಯದಲ್ಲಿ ಸಾತ್ವಿಕ ಶಕ್ತಿ ಸಂಪನ್ನಗೊಂಡ ಜಾಗೃತ ಕ್ಷೇತ್ರವಾಗಿ ಗುರುತಿಸಲ್ಪಡುತ್ತಿದೆ. ಅಂದಿನಿಂದಲೂ ಸೇವಾದಾರರಿಂದ ನಿತ್ಯರಂಗಪೂಜೆ, ಸುಬ್ರಹ್ಮಣ್ಯ ಹೋಮ, ಪ್ರಾಯಶ್ಚಿತ್ತ ಹೋಮಗಳು, ಶಾಂತಿ ಪ್ರಕ್ರಿಯೆಗಳು, ಅನ್ನದಾನ, ಸಾಂಸ್ಕೃತಿಕ ಕಲಾಸೇವೆಗಳು ನಿರಂತರ ನಡೆದು ಬರುತ್ತಿವೆ. ತಂತ್ರೋಕ್ತವಾಗಿ ನಿರ್ಮಾಣಗೊಂಡ ಈ ದೇವಾಲಯವು ಧನಾತ್ಮಕ ಶಕ್ತಿಯ ಸಂಗ್ರಹದಿಂದಾಗಿ ಜ್ಞಾನಕೇಂದ್ರವಾಗಿ, ದಾನಕೇಂದ್ರವಾಗಿ, ಸಾತ್ವಿಕ ಚಟುವಟಿಕೆಗಳ ತಾಣವಾಗಿ ಬದಲಾಗುತ್ತಿರುವುದನ್ನು ಎಲ್ಲರೂ ಗಮನಿಸಿದ ಅಂಶ.
ನಮ್ಮೀ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ ಸಂಪನ್ನಗೊಂಡು ಹನ್ನೆರೆಡು ಸಂವತ್ಸರಗಳು ಸಂದಿವೆ. ಇದು ಬ್ರಹ್ಮಕಲಶೋತ್ಸವಕ್ಕೆ ಪರಿಪಕ್ವ ಕಾಲ. ಭಕ್ತರ ಮನೋಭೀಷ್ಟ ಪೂರೈಸುವ ದೇವಾಲಯ ಹಾಗು ಶ್ರೀಸ್ವಾಮಿಯ ಸಾನಿಧ್ಯ ವೃದ್ಧಿಗಾಗಿ ಮತ್ತೊಮ್ಮೆ 19.04.2018 ರಂದು ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿದೆ.
ಶ್ರೀ ದೇವಳದ ಶತಮಾನೋತ್ಸವದ ಪ್ರಯುಕ್ತ ದಿನಾಂಕ 08.10.2019 ರಿಂದ 30.04.2020ರ ವರೆಗೆ ವೇದಕೃಷಿಕ ಶ್ರೀ ಕೆ.ಎಸ್.ನಿತ್ಯಾನಂದರ ಸಮಗ್ರ ಮಾರ್ಗದರ್ಶನದಲ್ಲಿ ಜನಮಾನಸದಲ್ಲಿ ಸುಜ್ಞಾನದ ಹೊಂಬೆಳಕನ್ನು ಪಸರಿಸುವ “ಮಹಾವ್ರತ ದೀರ್ಘಸತ್ರ ಯಾಗ“ವೂ ಹತ್ತು ಹಲವು ಸಂಯೋಜಿತ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿದೆ.
26.10.2020 ವಿಜಯ ದಶಮಿಯಂದು ಜನಮಾನಸದಲ್ಲಿ ಸುಜ್ಞಾನ ಪ್ರಸಾರಕ್ಕಾಗಿ ಶ್ರೀ ದೇವಳದ ಯಕ್ಷಗಾನ ಮೇಳವೊಂದನ್ನು ಪ್ರಾರಂಭಿಸಲಾಯಿತು. ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ. ಎಂಬ ನಾಮದಲ್ಲಿ ಉತ್ಕೃಷ್ಟ ಕಲಾವಿದರನ್ನು ಒಳಗೊಂಡ ಈ ಕಲಾ ತಂಡವು ಯಶಸ್ವಿ ಪ್ರದರ್ಶನಗಳನ್ನು ನೀಡುತ್ತಿದೆ.
History
Pavanje, historically referred to as Nagavruja Kshetra, meaning the land of Yaaga (Yajnas), great scholars, Saadhakas, and Tapasvis, is home to the Shri Jnanashakthi Subrahmanyaswami Temple, a prominent Hindu temple dedicated to Lord Subrahmanya. Established in 1920 by the Kodimane Vasubhatt family, the temple is located along National Highway 66 and is a well-known pilgrimage center in the region.
Shri Jnanashakthi Subrahmanyaswami
The presiding deity, Lord Subrahmanya, is revered in this temple as Jnanashakthi Subrahmanyaswami, embodying the combined energies of Shiva, Shakti, and Jnana (divine knowledge and spiritual power). This unique form symbolizes spiritual strength, wisdom, and divine protection.
Yativarenya Annappa Swami
He is regarded as the main driving force of the temple and the entire kshetra. Historical accounts state that Yativarenya Annappa Swami lived nearly 2000 years ago and remained in a single physical body for 800 years through intense penance.[1] He later transferred his tapas shakti (spiritual energy), knowledge, and powers to Kodandarama Muni, also known as Kola Muni. Kola Muni is said to have poured his energy and wisdom into Adi Shankaracharya, appearing in the form of a crocodile and biting him during a ritual dip in the river—an event symbolizing the sacred transmission of knowledge.
Renovation
The temple underwent significant renovation culminating in the Prathishtha Brahmakalashotsava on 9 June 2005, celebrated in the gracious presence of Sri Sri Jagadguru Shankaracharya Mahasamsthanam Dakshinamnaya Shri Shringeri Sharada Peethadheeshwara Shri Shri Jagadguru Bharathitheertha Mahaswamigalu. Since then, Shri Jnanashakthi Subrahmanyaswami Temple has become a vibrant hub of religious, cultural, and social activities for over 20 years.
Rituals
The temple conducts daily rituals and celebrates major festivals such as Champa Shashti Mahotsava (Subrahmanya Shashti), Maha Rathotsava (chariot festival), and the month-long Karthika Deepotsava, attracting thousands of devotees. It is sanctified by daily performances of Rangapooja, Gopooja, and Nithyannadana (daily free meal service in the noon). Various Havanas, including Sri Subrahmanya Homa, Veda Parayanas (chanting), and other Anushthanas, are regularly conducted. On every Sankramana, the temple observes Sankramanotsava at the Sri Sharadhwatha Yajnangana, featuring Veda recitations, instrumental and vocal music, and Indian classical cultural performances from sunrise to sunset.
Gayatri Yaga in 2002, A month long Pundareeka Maha Yaga in 2002, A week long Soutramani Gavamayana Yaga in 2007, 10 months long Vishwa Jigeeshad Yaga in 2017-18, 206 days long Maha Vrata Deergha Satra Yaga in 2019-20 were performed here.
Parivara Devathas
The temple premises also house several Parivara Devatha sannidhis, including shrines for Shri Sharadaparameshwari, Shri Varaprada Ganapathi, Shri Shankara Bhagavatpada, and Panchavati Sahita Kambala Naga. In addition, there are dedicated sanctums for Shri Anjaneyaswami, Shri Gopalakrishna Pandurangaswami, and Shri Goutameshwara, enriching the spiritual diversity of the temple complex.
Yakshagana Mela
On 26 October 2020, Vijayadashami day, the temple initiated a Yakshagana troupe to promote cultural awareness and spiritual knowledge among the public. Named Shri Jnanashakthi Subrahmanyaswami Kripaposhitha Yakshagana Mandali, Nagavruja Kshetra Pavanje, this troupe comprises excellent artists and has been delivering successful performances under the leadership of Patla Sathish Shetty.
Go Shaale
The temple also established a newly built cow shelter, Shri Jnanashakthi Gokula. This magnificent facility, designed to care for over a hundred cows, stands as a symbol of devotion and sustainable welfare, enhancing the temple’s commitment to service and compassion.
Its serene riverside setting and spiritual atmosphere make it an important religious and cultural site in coastal Karnataka.
Temple Timings & Puja Timings
- 4.30 Am to 8 pm ( MON TO SUNDAY )
- ಪ್ರಾತಃ ಕಾಲದ ಪೂಜೆ : 6 ಘಂಟೆಗೆ
- ಮಧ್ಯಾಹ್ನದ ಮಹಾ ಪೂಜೆ : 12 ಘಂಟೆಗೆ
- ನಿತ್ಯಾನ್ನದಾನ : ಮಧ್ಯಾಹ್ನ 12 ಘಂಟೆಯಿಂದ 2.30 ರ ವರೆಗೆ.
- ನಿತ್ಯ ರಂಗಪೂಜೆ ಸಹಿತ ಸಾಯಂಕಾಲದ ಪೂಜೆ : ಸಂಜೆ 6.30 ರಿಂದ 7.30 ರ ವರೆಗೆ.