ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ.

Shri Jnanashakthi Subrahmanyaswami Temple, Nagavruja Kshetra Pavanje

ಸುಬ್ರಹ್ಮಣ್ಯ ಮಾನಸ ಪೂಜೆ – Subrahmanya Manasa Pooje

ಶ್ರೀಯುತ ದಿ.ಎರ್ಮಾಳು ರಾಮಚಂದ್ರ ರಾಯರು ಸುಮಾರು 4 ದಶಕಗಳ ಕಾಲ ಪಾವಂಜೆ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿದ್ದು ಎಲ್ಲಾ ಕೆಲಸಗಳಲ್ಲಿಯೂ ತ್ರಿಕರಣಪೂರ್ವಕವಾಗಿ ತೊಡಗಿಸಿಕೊಂಡಿದ್ದರು. ಶ್ರೀಯುತರು ಜೀವನದ ಕೊನೆಯತನಕವೂ ನಿತ್ಯ ನಿರಂತರವಾಗಿ ಶ್ರೀಸ್ವಾಮಿಯನ್ನು ಮನಸ್ಸಿನಲ್ಲಿಯೇ ಆರಾಧಿಸುತ್ತಿದ್ದರು. ಈ ಮೌನ ಪೂಜೆಯನ್ನು ವೇದಕೃಷಿಕ ಶ್ರೀ ಕೆ.ಎಸ್ ನಿತ್ಯಾನಂದರು ಪದಪುಂಜಗಳನ್ನು ಜೋಡಿಸಿ, ಭಾವವನ್ನು ಸಂಯೋಜಿಸಿ, ಭಕ್ತಿಯನ್ನು ಅಂತರ್ಗತಗೊಳಿಸಿ ಲಿಪಿಬದ್ಧಗೊಳಿಸಿದ್ದಾರೆ. ಈ ಸುಬ್ರಹ್ಮಣ್ಯ ಮಾನಸ ಪೂಜೆಯನ್ನು ಭಾಗವತ ಪಟ್ಲ ಸತೀಶ ಶೆಟ್ಟರು ಅತ್ಯಂತ ಸುಶ್ರಾವ್ಯವಾಗಿ ಹಾಡಿದ್ದಾರೆ. ಇದರ ಪ್ರಯೋಜನವನ್ನು ಆಸ್ತಿಕ ಜನರು ಪಡೆದುಕೊಳ್ಳಬೇಕು, ಜೀವನದಲ್ಲಿ ಧನ್ಯತೆಯನ್ನು ಕಾಣಬೇಕು ಎಂದು ಹಂಬಲಿಸುತ್ತಾ ಈ ದೃಶ್ಯಾವಳಿಯನ್ನು ಲೋಕಾರ್ಪಣೆ ಮಾಡುತ್ತಿದ್ದೇವೆ. Shri Jnanashakthi Subrahmanyaswami Temple, Nagavruja Kshetra Pavanje. ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ , ನಾಗವೃಜ ಕ್ಷೇತ್ರ ಪಾವಂಜೆ.