ಶ್ರೀ ಅಣ್ಣಪ್ಪಯ್ಯ ಚರಿತ್ರೆ
ಸಪ್ತ ಋಷಿಗಳಲ್ಲಿ ಶ್ರೇಷ್ಠರಾದ ವಸಿಷ್ಠರ ಅಂಶದಲ್ಲಿ ಸುಮಾರು 2000 ವರುಷದ ಹಿಂದೆ ಜನಿಸಿದವರು ಶ್ರೀ ಅಣ್ಣಪ್ಪಯ್ಯನವರು. ಷಟ್ ಶಾಸ್ತ್ರ ಕೋವಿದರಾದ ಇವರು ತನ್ನಯ ಜೀವಿತಾವಧಿಯಲ್ಲಿ ಅಖಂಡಭಾರತಾದ್ಯಂತ ಸಂಚರಿಸಿ ದೇಶದೆಲ್ಲೆಡೆ ನ್ಯಾಯದಾನದ ವ್ಯವಸ್ಥೆಯನ್ನು ಮಾಡಿ ಧರ್ಮ ನೆಲೆಯಾಗುವಂತೆ ಮಾಡಿದ ಯತಿಶ್ರೇಷ್ಠರು. ಪ್ರಾತಃಸ್ಮರಣೀಯರಾದ ಇವರು ಒಂದು ಕೈಯಲ್ಲಿ ಪಂಜು (ಅಜ್ಞಾನವೆಂಬ ಕತ್ತಲೆಯನ್ನು ನೀಗಿಸುವ ಸಂಕೇತ) ಇನ್ನೊಂದರಲ್ಲಿ ಉರುಳಿ (ಸಾಧನೆಯ ದ್ಯೋತಕ) ಹಿಡಿದು ಸತ್ಯದೇವತೆ, ಪಂಜುರ್ಲಿ, ಅಣ್ಣಪ್ಪ ಪಂಜುರ್ಲಿ, ಅಣ್ಣಪ್ಪ ಸ್ವಾಮಿ ಇತ್ಯಾದಿ ಹೆಸರುಗಳಲ್ಲಿ ದೈವವಾಗಿ ಪೂಜೆಗೊಳ್ಳುತ್ತಿದ್ದಾರೆ. ನಿತ್ಯ ಸತ್ಯೋಪಾಸಕರಾದ ಬ್ರಹ್ಮದೇವನ …