ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ

Shri Jnanashakthi Subrahmanyaswami Temple, Nagavruja Kshetra Pavanje

News & Events

ಪತ್ತನಾಜೆ – ಅಂಕುರಾರ್ಪಣೆ, ನಿರಂತರ ರುದ್ರಾಭಿಷೇಕ, ವರುಣ + ಪರ್ಜನ್ಯ ಆರಾಧನೆ

ದಿನಾಂಕ 24.05.2024ರಂದು ಪತ್ತನಾಜೆಯ ಪ್ರಯುಕ್ತ ಶ್ರೀ ದೇವಳದಲ್ಲಿ ಬೆಳಿಗ್ಗೆ ಅಂಕುರಾರ್ಪಣೆ, ಶ್ರೀ ಗೌತಮೇಶ್ವರ ಸನ್ನಿಧಿಯಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ರುದ್ರಾಭಿಷೇಕವು ಜರಗಲಿದೆ. ಹಾಗೆಯೇ, ಬೆಳಿಗ್ಗೆ 7 ಘಂಟೆಗೆ ವರುಣ+ಪರ್ಜನ್ಯ ಕಲಶ ಪ್ರತಿಷ್ಠೆ, ಸಂಜೆ 7ಕ್ಕೆ ಪುಷ್ಕರಿಣಿಯಲ್ಲಿ ವರುಣ+ಪರ್ಜನ್ಯ ಪೂಜೆ, ತದನಂತರ ಶ್ರೀದೇವರ ಸನ್ನಿಧಿಯಲ್ಲಿ ನಿತ್ಯಪೂಜೆ, ನಿತ್ಯರಂಗಪೂಜೆ ಸಂಪನ್ನಗೊಳ್ಳಲಿದೆ. ಸರ್ವರಿಗೂ ಆದರದ ಸ್ವಾಗತ

ವಾರ್ಷಿಕ ಮಹೋತ್ಸವ – 2024

ಶ್ರೀ ದೇವಳದಲ್ಲಿ ವಾರ್ಷಿಕ ಮಹೋತ್ಸವವು ದಿನಾಂಕ 13.04.2024ರಂದು ಅಂಕುರಾರ್ಪಣೆಯಿಂದ ಮೊದಲ್ಗೊಂಡು, 14ರಂದು ಧ್ವಜಾರೋಹಣ, 18 ರಂದು ಮಹಾ ರಥೋತ್ಸವ, 19ರಂದು ಅವಭೃತ ಸ್ನಾನ, ಧ್ವಜಾವರೋಹಣದೊಂದಿಗೆ ಸಂಪನ್ನಗೊಳ್ಳಲಿದೆ.

ಶ್ರೀ ಗೋಪಾಲಕೃಷ್ಣ ಪಾಂಡುರಂಗ ದೇವರ ಚತುರ್ಥ ಪ್ರತಿಷ್ಠಾ ವರ್ಧಂತ್ಯುತ್ಸವ

ದಿನಾಂಕ 04.04.2024 ರಂದು ಶ್ರೀ ದೇವಳದ ಪ್ರಾಕಾರದಲ್ಲಿ ಪ್ರತಿಷ್ಠೆಗೊಂಡ ಶ್ರೀ ಗೋಪಾಲಕೃಷ್ಣ ಪಾಂಡುರಂಗ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವ ಜರಗಲಿದೆ.

“ಶ್ರೀ ವಾಣಿ ವಿಧ್ಯಾ ಕೇಂದ್ರದ “ನಾಗವೃಜ” ಶಾಖೆಯ ಪ್ರಾರಂಭೋತ್ಸವ”

ಶ್ರೀ ವಾಣಿ ಎಜುಕೇಶನ್ ಸೆಂಟರ್ ಟ್ರಸ್ಟ್ (ರಿ) ಬೆಂಗಳೂರು, ಇದರ ಆಡಳಿತಕೊಳಪಟ್ಟ ಶ್ರೀ ವಾಣಿ ವಿಧ್ಯಾ ಕೇಂದ್ರ “ನಾಗವೃಜ” ಶಾಖೆಯ ಪ್ರಾರಂಭೋತ್ಸವವು 28.02.2024ರಂದು ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿಯ ಆರಾಧನೆಯೊಂದಿಗೆ ಸಂಪನ್ನಗೊಂಡಿತು.

ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮರಣಾರ್ಥ ಆರಾಧನೋತ್ಸವ

ದಿನಾಂಕ 15 .01.2024 ರಂದು ಸೂರ್ಯೋದಯದಿಂದ ಸೂರ್ಯಾಸ್ತ ಪರ್ಯಂತ ಶ್ರೀದೇವಳದಲ್ಲಿ “ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮರಣಾರ್ಥ ಆರಾಧನೋತ್ಸವ” ಜರಗಲಿದೆ.