ಸ್ವರ್ಣಗೌರಿ ವ್ರತ ಹಾಗೂ ಗಣೇಶ ಚತುರ್ಥಿ | 14.09.2026
ದಿನಾಂಕ 14.09.2026 ಸೋಮವಾರದಂದು ಸ್ವರ್ಣಗೌರಿ ವ್ರತ ಹಾಗೂ ಗಣೇಶ ಚತುರ್ಥಿ ಯ ಪ್ರಯುಕ್ತ ಶ್ರೀ ದೇವಳದ ಶ್ರೀ ವರಪ್ರದಗಣಪತಿ ಸನ್ನಿಧಿಯಲ್ಲಿ ನಡೆಯುವ ವಿಶೇಷ ಸೇವೆಗಳ ವಿವರ ತದನಂತರ ಸಂಜೆ 4ರಿಂದ ವಿಶೇಷ ಅಲಂಕಾರ, ನೈವೇದ್ಯ, ಅಷ್ಟಾವಧಾನ ಸೇವೆಗಳೊಂದಿಗೆ ಮಹಾಪೂಜೆ ಜರಗಿ ಪ್ರಸಾದ ವಿನಿಯೋಗ ನಡೆಯಲಿರುವುದು. (ವರಪ್ರದಗಣಪತಿ ಹೋಮ ಸೇವೆಯು ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ಘಂಟೆಯವರೆಗೆ ನಡೆಯಲಿದ್ದು, ಭಕ್ತರಿಗೆ ವೈಯುಕ್ತಿಕ ಸೇವೆ ಸಲ್ಲಿಸಲು ಅವಕಾಶವಿರುತ್ತದೆ.) ಸರ್ವರಿಗೂ ಆದರದ ಸ್ವಾಗತ. ಆಡಳಿತ ಮಂಡಳಿ














