ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ

Shri Jnanashakthi Subrahmanyaswami Temple, Nagavruja Kshetra Pavanje

News & Events

ಮಹಾ ರಥೋತ್ಸವ | ನಾಗವೃಜ ಉತ್ಸವ | 13 ಏಪ್ರಿಲ್ ರಿಂದ 19 ಏಪ್ರಿಲ್ ವರೆಗೆ

“ನಾಗವೃಜ ಉತ್ಸವ”ಶ್ರೀ ದೇವಳದಲ್ಲಿ ವಾರ್ಷಿಕ ಮಹೋತ್ಸವವು ದಿನಾಂಕ 13.04.2026ರಂದು ಅಂಕುರಾರ್ಪಣೆಯಿಂದ ಮೊದಲ್ಗೊಂಡು, 14ರಂದು ಧ್ವಜಾರೋಹಣ, 18 ರಂದು ಮಹಾ ರಥೋತ್ಸವ, 19ರಂದು ಅವಭೃತ ಸ್ನಾನ, ಧ್ವಜಾವರೋಹಣ, ಅಣ್ಣಪ್ಪ ಸ್ವಾಮಿಗೆ ನರ್ತನ ಸೇವೆಯೊಂದಿಗೆ ಸಂಪನ್ನಗೊಳ್ಳಲಿದೆ.

ಶ್ರೀ ಗೋಪಾಲಕೃಷ್ಣ ಪಾಂಡುರಂಗಸ್ವಾಮಿಯ ಪ್ರತಿಷ್ಠಾ ವರ್ಧಂತ್ಯುತ್ಸವ – 13.03.2026

ಶ್ರೀ ಗೋಪಾಲಕೃಷ್ಣ ಪಾಂಡುರಂಗಸ್ವಾಮಿಯ ಪ್ರತಿಷ್ಠಾ ವರ್ಧಂತ್ಯುತ್ಸವದ ಸಂದರ್ಭದಲ್ಲಿ ಆಡಳಿತ ಮಂಡಳಿ.ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ

ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮರಣಾರ್ಥ ಆರಾಧನೋತ್ಸವ -14.01.2026

ಸರ್ವರಿಗೂ ಆದರದ ಸ್ವಾಗತ. #pavanjemela#ಪಾವಂಜೆ#Subrahmanya#sjsstemple#jnanashakthi#Yakshagana#pavanje#champa#shashti#mahotsava#annadaana#ಯಕ್ಷಗಾನ#ಜ್ಞಾನಶಕ್ತಿ#ಸುಬ್ರಹ್ಮಣ್ಯ#ಚಂಪಾ#ಷಷ್ಠಿ#ಮಹೋತ್ಸವ#ನಾಗಾರಾಧನೆ#ಅನ್ನದಾನ#ಕರಾವಳಿ#ಉತ್ಸವ#ರಥೋತ್ಸವ#ನಾಗವೃಜ

ಕಿರು ಷಷ್ಠಿ ಉತ್ಸವ | 26.12.2025

ಸರ್ವರಿಗೂ ಆದರದ ಸ್ವಾಗತ. #pavanjemela#ಪಾವಂಜೆ#Subrahmanya#sjsstemple#jnanashakthi#Yakshagana#pavanje#champa#shashti#mahotsava#annadaana#ಯಕ್ಷಗಾನ#ಜ್ಞಾನಶಕ್ತಿ#ಸುಬ್ರಹ್ಮಣ್ಯ#ಚಂಪಾ#ಷಷ್ಠಿ#ಮಹೋತ್ಸವ#ನಾಗಾರಾಧನೆ#ಅನ್ನದಾನ#ಕರಾವಳಿ#ಉತ್ಸವ#ರಥೋತ್ಸವ#ನಾಗವೃಜ

ಚಂಪಾ ಷಷ್ಠಿ ಮಹೋತ್ಸವ | 24.11.2025 ರಿಂದ 26.11.2025

ಸರ್ವರಿಗೂ ಆದರದ ಸ್ವಾಗತ. #pavanjemela#ಪಾವಂಜೆ#Subrahmanya#sjsstemple#jnanashakthi#Yakshagana#pavanje#champa#shashti#mahotsava#annadaana#ಯಕ್ಷಗಾನ#ಜ್ಞಾನಶಕ್ತಿ#ಸುಬ್ರಹ್ಮಣ್ಯ#ಚಂಪಾ#ಷಷ್ಠಿ#ಮಹೋತ್ಸವ#ನಾಗಾರಾಧನೆ#ಅನ್ನದಾನ#ಕರಾವಳಿ#ಉತ್ಸವ#ರಥೋತ್ಸವ#ನಾಗವೃಜ

ಯಕ್ಷಗಾನ ಮೇಳದ ಆರನೇ ವರುಷದ ಯಾನಾರಂಭ | 02.11.2025

ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ. ಆರನೇ ವರ್ಷದ ಯಾನಾರಂಭವು ಆದಿತ್ಯವಾರ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದು, ಭಾಗವತರಿಗೆ ಜಾಗಟೆ, ಕಲಾವಿದರಿಗೆ ಗೆಜ್ಜೆ ನೀಡಿ, ಶ್ರೀ ದೇವರ ಪೂಜೆಯ ಮೂಲಕ ಆರಂಭಗೊಂಡಿತು. ಬಳಿಕ ಮೇಳದ ಸುವಸ್ತುಗಳೊಂದಿಗೆ ಚೌಕಿ ಪ್ರವೇಶಿಸಿ ಚೌಕಿ ಪೂಜೆ ಜರಗಿತು. ಇದೇ ಸಂದರ್ಭದಲ್ಲಿ ಮೇಳಕ್ಕೆ ಪರಂಪರೆಯ ನೂತನ ವೇಷಭೂಷಣಗಳನ್ನು, ಬೆಳ್ಳಿಯ ಪೂಜಾ …

ಯಕ್ಷಗಾನ ಮೇಳದ ಆರನೇ ವರುಷದ ಯಾನಾರಂಭ | 02.11.2025 Read More »

ಕಾರ್ತಿಕ ದೀಪೋತ್ಸವ | 22.10.2025 ರಿಂದ 20.11.2025

ಶ್ರೀ ದೇವಳದಲ್ಲಿ ಕಾರ್ತಿಕ ಮಾಸ ಪರ್ಯಂತ ಸಂಜೆ ನಿತ್ಯ ರಂಗಪೂಜೆಯ ಬಳಿಕ ನಡೆಯುವ “ಕಾರ್ತಿಕ ದೀಪೋತ್ಸವ”ದ ಸಂಕ್ಷಿಪ್ತ ವಿವರಣೆ. ದೇಹೋ ದೇವಾಲಯ ಪ್ರೋಕ್ತೋ ಜೀವೋ ಹಂಸ: ಸದಾಶಿವ: | ತ್ಯಜೇತ್ ಅಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ ಪೂಜಯೇತ್ | ಇದು ಆತ್ಮ ಪರಮಾತ್ಮ ಅನುಸಂಧಾನೋಪಾಯ, ಸಾಧಕರಿಗೂ, ವಿದ್ವಾಂಸರಿಗೂ, ಜ್ಞಾನಿಗಳಿಗೂ ಸಾಧ್ಯವಾದ ಸ್ವರೂಪ ವಿಧಾನ. ಆದರೆ ಸಾಮಾನ್ಯರಿಗೂ ಪರಮಾತ್ಮ ಸಾನಿಧ್ಯ ಬೇಡವೇ? ಕೈವಲ್ಯ ಪ್ರಾಪ್ತಿಯ ಪ್ರಯತ್ನವಾದರೂ ಬೇಡವೇ? ಪ್ರಾಪಂಚಿಕ ಜೀವನದ ತೊಳಲಾಟ, ಡೊಂಬರಾಟದಿಂದ ಮುಕ್ತಿ ಬೇಡವೇ? ಜೀವನದ ಹೋರಾಟದಲ್ಲಿ …

ಕಾರ್ತಿಕ ದೀಪೋತ್ಸವ | 22.10.2025 ರಿಂದ 20.11.2025 Read More »

‘ಯಕ್ಷಾಂತರಂಗ’ ಶಿಬಿರಾರ್ಥಿಗಳಿಂದ ‘ಕಿರಾತಾರ್ಜುನ’ ಹಾಗೂ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ‘ಕರ್ಣಾರ್ಜುನ’ ಯಕ್ಷಗಾನ ಬಯಲಾಟ | 17.09.2025

ಕನ್ಯಾ ಸಂಕ್ರಮಣೋತ್ಸವದ ಪ್ರಯುಕ್ತ ‘ಯಕ್ಷಾಂತರಂಗ’ ಶಿಬಿರಾರ್ಥಿಗಳಿಂದ ಯಕ್ಷಗಾನ ಬಯಲಾಟ ‘ಕಿರಾತಾರ್ಜುನ’ ಹಾಗೂ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ‘ಕರ್ಣಾರ್ಜುನ’ ಪ್ರಸಂಗ ಪ್ರದರ್ಶನಗೊಂಡಿತು.

ನವರಾತ್ರಿ – ವಿಜಯ ದಶಮಿ | 22.09.2025 ರಿಂದ 02.10.2025

ಶ್ರೀ ದೇವಳದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ವಿಜಯ ದಶಮಿ ಪರ್ಯಂತ (22.09.2025 ರಿಂದ 02.10.2025) ಪ್ರತಿನಿತ್ಯ ಯಂತ್ರೋಪರಿ ಸ್ಥಾಪಿತ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿಯ ಆರಾಧನೆ, ಚಂಡಿಕಾ ಹೋಮ, ದುರ್ಗಾ ನಮಸ್ಕಾರ, ಇತ್ಯಾದಿ ಸೇವೆಗಳೊಂದಿಗೆ ಸಂಪನ್ನಗೊಂಡಿತು.