ದಿನಾಂಕ 14.09.2026 ಸೋಮವಾರದಂದು ಸ್ವರ್ಣಗೌರಿ ವ್ರತ ಹಾಗೂ ಗಣೇಶ ಚತುರ್ಥಿ ಯ ಪ್ರಯುಕ್ತ ಶ್ರೀ ದೇವಳದ ಶ್ರೀ ವರಪ್ರದಗಣಪತಿ ಸನ್ನಿಧಿಯಲ್ಲಿ ನಡೆಯುವ ವಿಶೇಷ ಸೇವೆಗಳ ವಿವರ
- ಸಿಂಧೂರ ಅರ್ಚನೆ
- ಪಂಚಾಮೃತಾಭಿಷೇಕ
- ಅಷ್ಟೋತ್ತರ ನಾಮಾರ್ಚನೆ
- ಮಂಗಳಾರತಿ
- ವರಪ್ರದಗಣಪತಿ ಹೋಮ
ತದನಂತರ ಸಂಜೆ 4ರಿಂದ ವಿಶೇಷ ಅಲಂಕಾರ, ನೈವೇದ್ಯ, ಅಷ್ಟಾವಧಾನ ಸೇವೆಗಳೊಂದಿಗೆ ಮಹಾಪೂಜೆ ಜರಗಿ ಪ್ರಸಾದ ವಿನಿಯೋಗ ನಡೆಯಲಿರುವುದು.
(ವರಪ್ರದಗಣಪತಿ ಹೋಮ ಸೇವೆಯು ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ಘಂಟೆಯವರೆಗೆ ನಡೆಯಲಿದ್ದು, ಭಕ್ತರಿಗೆ ವೈಯುಕ್ತಿಕ ಸೇವೆ ಸಲ್ಲಿಸಲು ಅವಕಾಶವಿರುತ್ತದೆ.)
ಸರ್ವರಿಗೂ ಆದರದ ಸ್ವಾಗತ.
ಆಡಳಿತ ಮಂಡಳಿ




