ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ

Shri Jnanashakthi Subrahmanyaswami Temple, Nagavruja Kshetra Pavanje

ತೈಲಾಭಿಷೇಕ ಮತ್ತು ಭಜನಾ ಸಂಕೀರ್ತನೆ

ಶ್ರೀ ಕ್ಷೇತ್ರದಲ್ಲಿರುವ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ಸೂರ್ಯೋದಯದಿಂದ ಸೂರ್ಯಾಸ್ತ ಪರ್ಯಂತ ನಿರಂತರ “ತೈಲಾಭಿಷೇಕ ಮತ್ತು ಭಜನಾ ಸಂಕೀರ್ತನೆ” ಜರಗಿತು

ನಾಗರ ಪಂಚಮಿ |17.08.2026

17.08.2026 ರಂದು ನಾಗರ ಪಂಚಮಿಯ ಪ್ರಯುಕ್ತ ಶ್ರೀ ದೇವಳದ ಚಿತ್ರಕೂಟ ಪಂಚವಟಿ ಸಹಿತ ಕಂಬಳ ನಾಗ ಸನ್ನಿಧಿಯಲ್ಲಿ ನಾಗರ ಪಂಚಮಿಯು ಸಂಪನ್ನಗೊಂಡಿತು.

ಸಿಂಹ ಸಂಕ್ರಮಣೋತ್ಸವ – ಯಕ್ಷ ನಾದಾರ್ಚನೆ |17.08.2026

ದಿನಾಂಕ 17.08.2026 ಸೋಮವಾರ ಸಂಜೆ 5.00 ರಿಂದ 7.00 ರವರೆಗೆ ಸಿಂಹ ಸಂಕ್ರಮಣೋತ್ಸದ ಅಂಗವಾಗಿ ಶ್ರೀ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ ಛಾಂದಸ ಗಣೇಶ ಕೊಲೆಕಾಡಿ ವಿರಚಿತ ಸ್ತುತಿ ಪದ್ಯಗಳಿಂದ “ಯಕ್ಷ ನಾದಾರ್ಚನೆ” ಭಾಗವತರು – ಮನ್ವಿತ್ ಶೆಟ್ಟಿ ಇರಾ, ಲಕ್ಷ್ಮೀನಾರಾಯಣ ಹೊಳ್ಳ, ವಿಶ್ವಾಸ್ ಭಟ್ ಕರ್ಬೆಟ್ಟು ಮದ್ದಳೆ , ಚೆಂಡೆ – ಮಯೂರ ನಾಯ್ಗ ಮಾಡೂರು, ಸ್ಕಂದ ಕೊನ್ನಾರ್ಚಕ್ರ ತಾಳ – ಪೂರ್ಣೇಶ್ ಆಚಾರ್ಯ ನಿರೂಪಣೆ – ದೀವಿತ್.ಎಸ್.ಕೋಟ್ಯಾನ್

ಕರ್ಕಾಟಕ ಸಂಕ್ರಮಣೋತ್ಸವ – ಪವಮಾನ ಪಾರಾಯಣ ಪೂರ್ವಕ ಕ್ಷೀರಾಭಿಷೇಕ

ದಿನಾಂಕ 17.07.2026 ಶುಕ್ರವಾರ ಬೆಳಿಗ್ಗೆ 6.00 ರಿಂದ ಸಂಜೆ 7.00 ರವರೆಗೆ ಕರ್ಕಾಟಕ ಸಂಕ್ರಮಣೋತ್ಸವದ ಅಂಗವಾಗಿ ಶ್ರೀ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿಗೆ ಪವಮಾನ ಪಾರಾಯಣ ಪೂರ್ವಕ ಕ್ಷೀರಾಭಿಷೇಕ ವಿಶೇಷ ಸೇವೆಯು ಆರೋಗ್ಯ ಸಿದ್ಧಿಗಾಗಿ ಜರಗಿತು.

ಪತ್ತನಾಜೆ – ಅಂಕುರಾರ್ಪಣೆ, ನಿರಂತರ ರುದ್ರಾಭಿಷೇಕ, ವರುಣ + ಪರ್ಜನ್ಯ ಆರಾಧನೆ | 25.05.2026

ಶ್ರೀ ದೇವಳದಲ್ಲಿ 25.05.2026 ಪತ್ತನಾಜೆಯ ಪ್ರಯುಕ್ತ ಶ್ರೀ ಗೌತಮೇಶ್ವರನಿಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಿರಂತರ ರುದ್ರಾಭಿಷೇಕ, ವರುಣ+ಪರ್ಜನ್ಯ ಆರಾಧನೆ ಜರಗಲಿದೆ

ಅಗೇಲು ಸೇವೆ / Agelu Seve – 27.04.2026

ಅಗೇಲು ಸೇವೆ ಈ ವಿಶಿಷ್ಟ ಅಗೇಲು ಸೇವೆಯೆಂಬ ಶೈವಾಗಮೋಕ್ತ ತಂತ್ರೋಕ್ತ ಪೂಜಾ ವಿಧಿಯು ಶ್ರೀ ದೇವಳದಲ್ಲಿ ಏಪ್ರಿಲ್ 27 ರಂದು ಮಧ್ಯಾಹ್ನ 4 ಗಂಟೆಯಿಂದ ನಡೆಯಲಿದೆ. ನಿರಂತರವಾಗಿ 1000 ತಂತ್ರೋಕ್ತ ರೀತ್ಯಾ ರಂಗಪೂಜೆ ನಡೆದ ದೇವಾಲಯದಲ್ಲಿ ಈ ಅಗೇಲು ಸೇವೆಯೆಂಬ ವಿಶೇಷ ಪ್ರಕ್ರಿಯೆಯನ್ನು ನಡೆಸಲು ಅವಕಾಶವಿರುತ್ತದೆ. ಅಂತೆಯೇ ನಮ್ಮೀ ದೇವಾಲಯದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ದಿನದಿಂದ ಇಂದಿನವರೆಗೂ ನಿರಂತರವಾಗಿ ರಂಗಪೂಜೆ ನಡೆಯುತ್ತಿದ್ದು (7800ಕ್ಕೂ ಮೇಲ್ಪಟ್ಟು) ಪ್ರತಿ ವರ್ಷ ವೈಶಾಖ ಶುದ್ಧ ಏಕಾದಶಿಯಂದು ಅಗೇಲು ಸೇವೆಯನ್ನು ಸಲ್ಲಿಸಲಾಗುತ್ತಿದೆ. ಮಹಾರಂಗಪೂಜೆಯ ವಿಸ್ತೃತ …

ಅಗೇಲು ಸೇವೆ / Agelu Seve – 27.04.2026 Read More »

ಮಹಾ ರಥೋತ್ಸವ | ನಾಗವೃಜ ಉತ್ಸವ | 13 ಏಪ್ರಿಲ್ ರಿಂದ 19 ಏಪ್ರಿಲ್ ವರೆಗೆ

“ನಾಗವೃಜ ಉತ್ಸವ”ಶ್ರೀ ದೇವಳದಲ್ಲಿ ವಾರ್ಷಿಕ ಮಹೋತ್ಸವವು ದಿನಾಂಕ 13.04.2026ರಂದು ಅಂಕುರಾರ್ಪಣೆಯಿಂದ ಮೊದಲ್ಗೊಂಡು, 14ರಂದು ಧ್ವಜಾರೋಹಣ, 18 ರಂದು ಮಹಾ ರಥೋತ್ಸವ, 19ರಂದು ಅವಭೃತ ಸ್ನಾನ, ಧ್ವಜಾವರೋಹಣ, ಅಣ್ಣಪ್ಪ ಸ್ವಾಮಿಗೆ ನರ್ತನ ಸೇವೆಯೊಂದಿಗೆ ಸಂಪನ್ನಗೊಳ್ಳಲಿದೆ.

ಶ್ರೀ ಗೋಪಾಲಕೃಷ್ಣ ಪಾಂಡುರಂಗಸ್ವಾಮಿಯ ಪ್ರತಿಷ್ಠಾ ವರ್ಧಂತ್ಯುತ್ಸವ – 13.03.2026

ಶ್ರೀ ಗೋಪಾಲಕೃಷ್ಣ ಪಾಂಡುರಂಗಸ್ವಾಮಿಯ ಪ್ರತಿಷ್ಠಾ ವರ್ಧಂತ್ಯುತ್ಸವದ ಸಂದರ್ಭದಲ್ಲಿ ಆಡಳಿತ ಮಂಡಳಿ.ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ