ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ

Shri Jnanashakthi Subrahmanyaswami Temple, Nagavruja Kshetra Pavanje

News & Events

ಸಿಂಹ ಸಂಕ್ರಮಣೋತ್ಸವ | ಯಕ್ಷಗಾನ ಬಯಲಾಟ | 17.08.2025

ದಿನಾಂಕ 17.08.2025ರಂದು “ಸಿಂಹ ಸಂಕ್ರಮಣೋತ್ಸವ”ದ ಪ್ರಯುಕ್ತ ಮಧ್ಯಾಹ್ನ 4.30ರಿಂದ ಶ್ರೀ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ ಯಕ್ಷಗಾನ ಬಯಲಾಟ. •ಸರ್ವರಿಗೂ ಆದರದ ಸ್ವಾಗತ• ಆಡಳಿತ ಮಂಡಳಿ

ನಾಗರ ಪಂಚಮಿ | 29.07.2025

ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದ ಚಿತ್ರಕೂಟ ಪಂಚವಟಿ ಸಹಿತ ಕಂಬಳ ನಾಗ ಸನ್ನಿಧಿಯಲ್ಲಿ ನಾಗರ ಪಂಚಮಿಯು ಸಂಪನ್ನಗೊಂಡಿತು.

ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ತೈಲಾಭಿಷೇಕ ಮತ್ತು ಭಜನಾ ಸಂಕೀರ್ತನೆ | 26.07.2025

ಶ್ರೀ ಕ್ಷೇತ್ರದಲ್ಲಿರುವ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ 26.07.2025ರಂದು ಶ್ರಾವಣ ಶನಿವಾರದ ಪ್ರಯುಕ್ತ ಸೂರ್ಯೋದಯದಿಂದ ಸೂರ್ಯಾಸ್ತ ಪರ್ಯಂತ ನಿರಂತರ “ತೈಲಾಭಿಷೇಕ ಮತ್ತು ಭಜನಾ ಸಂಕೀರ್ತನೆ” ಜರಗಿತು.

ಮಿಥುನ ಸಂಕ್ರಮಣೋತ್ಸವ | ಯಕ್ಷಗಾನ ತಾಳಮದ್ದಳೆ “ಮಯೂರಧ್ವಜ” – 15.06.2025

ದಿನಾಂಕ 15.06.2025ರಂದು “ಮಿಥುನ ಸಂಕ್ರಮಣೋತ್ಸವ”ದ ಪ್ರಯುಕ್ತ ಮಧ್ಯಾಹ್ನ 4.00ರಿಂದ ಶ್ರೀ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ ಯಕ್ಷಗಾನ ತಾಳಮದ್ದಳೆ “ಮಯೂರಧ್ವಜ”

ಪತ್ತನಾಜೆ – ಅಂಕುರಾರ್ಪಣೆ, ನಿರಂತರ ರುದ್ರಾಭಿಷೇಕ, ವರುಣ + ಪರ್ಜನ್ಯ ಆರಾಧನೆ.

ಶ್ರೀ ದೇವಳದಲ್ಲಿ 24.05.2025 ಪತ್ತನಾಜೆಯ ಪ್ರಯುಕ್ತ ಶ್ರೀ ಗೌತಮೇಶ್ವರನಿಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಿರಂತರ ರುದ್ರಾಭಿಷೇಕ, ವರುಣ+ಪರ್ಜನ್ಯ ಆರಾಧನೆ ಸಂಪನ್ನಗೊಂಡಿತು

ಅಗೇಲು ಸೇವೆ / Agelu Seve – 08.05.2025

ಅಗೇಲು ಸೇವೆ ಈ ವಿಶಿಷ್ಟ ಅಗೇಲು ಸೇವೆಯೆಂಬ ಶೈವಾಗಮೋಕ್ತ ತಂತ್ರೋಕ್ತ ಪೂಜಾ ವಿಧಿಯು ಶ್ರೀ ದೇವಳದಲ್ಲಿ ಮೇ 8ರಂದು ಮಧ್ಯಾಹ್ನ 4 ಗಂಟೆಯಿಂದ ನಡೆಯಲಿದೆ. ನಿರಂತರವಾಗಿ 1000 ತಂತ್ರೋಕ್ತ ರೀತ್ಯಾ ರಂಗಪೂಜೆ ನಡೆದ ದೇವಾಲಯದಲ್ಲಿ ಈ ಅಗೇಲು ಸೇವೆಯೆಂಬ ವಿಶೇಷ ಪ್ರಕ್ರಿಯೆಯನ್ನು ನಡೆಸಲು ಅವಕಾಶವಿರುತ್ತದೆ. ಅಂತೆಯೇ ನಮ್ಮೀ ದೇವಾಲಯದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ದಿನದಿಂದ ಇಂದಿನವರೆಗೂ ನಿರಂತರವಾಗಿ ರಂಗಪೂಜೆ ನಡೆಯುತ್ತಿದ್ದು (7300ಕ್ಕೂ ಮೇಲ್ಪಟ್ಟು) ಪ್ರತಿ ವರ್ಷ ವೈಶಾಖ ಶುದ್ಧ ಏಕಾದಶಿಯಂದು ಅಗೇಲು ಸೇವೆಯನ್ನು ಸಲ್ಲಿಸಲಾಗುತ್ತಿದೆ. ಮಹಾರಂಗಪೂಜೆಯ ವಿಸ್ತೃತ ರೂಪವಾಗಿ …

ಅಗೇಲು ಸೇವೆ / Agelu Seve – 08.05.2025 Read More »